Saturday 29 August 2015

ಆಡಿಕೊಳ್ಳುವವರ ಮುಂದೆ, ಬಡಿದಾಡಿಯಾದರೂ ಗೆಲ್ಲಬೇಕು.

Don't try to sell your 'emotions' because nobody gonna buy it. ಸತ್ಯದ ಮಾತುಗಳವು. ಇರೋ 'ಪ್ರಾಬ್ಲಂ'ಗಳಿಗೆ ಪರಿಹಾರ ಕೊಡಿಸೋ ಅಂತ ಗೋಗರೆದರೆ, ಕೇಳಿಸಿಕೊಂಡವ ನಕ್ಕು ಬಿಡುತ್ತಾನೆ. Infact ಅವನಿಗೆ ಇಂತದ್ದೊಂದು ಸಮಸ್ಯೆಗೆ 'ಸೊಲ್ಯೂಷನ್' ಕೊಡಬೇಕು ಅಂತನಿಸಲ್ಲ. ಬದಲಾಗಿ 'He is glad that you have problems. ಅಂತವರ ಎದುರಲ್ಲಿ ಗೋಳಿಟ್ಟುಕೊಂಡು ಪರಿಹಾರಕ್ಕೆ ಅಂಗಲಾಚುವುದು ಮೂರ್ಖತನ. ನಮ್ಮ ಸಮಸ್ಯೆ ಇರೋದು ಇಲ್ಲೆ. ನಮ್ಮ ನೋವುಗಳಿಗೆ ಗ್ರಾಹಕರಾರು? ಯಾರು ಅದಕ್ಕೆ ಅರ್ಹರು? ಹುಡುಕೋದು ಕಷ್ಟ.   ಆದರೆ, ಪ್ರತಿಯೊಬ್ಬರ ಜೀವನದಲ್ಲೂ ಒಂದಷ್ಟು ಜನ 'Friends' ಅಂತಿರುತ್ತಾರೆ. ಅದರಲ್ಲಿ ಕೆಲವರು ಮಾತ್ರ 'Genuine' . ಉಳಿದವರು ಸುಮ್ಮನೆ ಲೆಕ್ಕ ಭರ್ತಿಗಾಗಿ ಇರುವಂತವರು. Genuine ಆದ Friend ಜೊತೆ ಹೇಳಿಕೊಂಡ ಅಷ್ಟೂ ಕಷ್ಟಗಳಿಗೆ ಪರಿಹಾರ ಸಿಗುತ್ತೆ ಅಂತಲ್ಲ. ಹೆಗಲ ಮೇಲಿದ್ದ ಭಾರದ ಚೀಲವನ್ನ ಒಂದಷ್ಟು ಹೊತ್ತು ಕೆಳಗಿಸಿದ ಭಾವ. ಸ್ವಲ್ಪ Relief ಅಷ್ಟೇ. Solution ಕೊಡುತ್ತಾನೋ ಇಲ್ಲವೋ But ಒಂದು Comfort Zone'ಗೆ ಎಳೆದು ಕೊಂಡೊಯ್ದು, ‌Console ಮಾಡುತ್ತಾನೆ. ಅಷ್ಟರ ಮಟ್ಟಿಗೆ ಉಪಕಾರಿ ಆತ. ಇಂಥವರೇ ಇರೋ ಒಂದು ಸರ್ಕಲ್ ಕಟ್ಟಿಕೊಂಡಿರುತ್ತೇವೆ. Close Friends ಅಂತ ಒಂದು Tag attach ಮಾಡಿರುತ್ತೇವೆ. ಎಕ್ಸಾಂ ಟಫ್ ಇತ್ತು ಕಣೋ ಅಂದಾಗ , ಬಿಡು ಗುರು Next ಟೈಮ್ ನೋಡೋಣಾ ಅಂತಾನೆ. ಹುಡುಗಿ ಕೈ ಕೊಟ್ಲು ಅಂದ್ರೆ ಹೆಗಲ ಮೇಲೆ ಕೈ ಹಾಕಿ ಕಣ್ಣೀರೊರಸುತ್ತಾನೆ. ಮದ್ಯರಾತ್ರಿ ಅಲ್ಲೆಲ್ಲೋ ನಿಂತು ಪೆಟ್ರೋಲ್ ಖತಂ ಅಂದ್ರೆ, ಖಾಲಿ ಬಾಟಲ್ ಹಿಡ್ಕೊಂಡು ಥಟ್ ಅಂತ ಪ್ರತ್ಯಕ್ಷನಾಗುತ್ತಾನೆ. ಯಾವತ್ತಿಗೂ ನಮ್ಮ ಕೈ ಬಿಡದಂತವನು ಆತ.   ಆದರೆ ಇವೆಲ್ಲವನ್ನ ಬಿಟ್ಟು ಉಳಿದೊಂದು ವರ್ಗ ನಮ್ಮ ಸುತ್ತಲೂ ಇರುತ್ತೆ. ಅವರೇನು ವಾಮಾಚಾರ ಮಾಡಿ ನಮ್ಮ ಲಗಾಡಿ ತೆಗೀಬೇಕು ಅನ್ನೋವಂತವರಲ್ಲ. ಬದಲಾಗಿ ನಾವು ಬಿದ್ದಾಗ ಮಾತ್ರ ಚಾಚೂ ತಪ್ಪದೇ ಒಂದು ಹಿಡಿಯಷ್ಟಾದರೂ ಮಣ್ಣು ಹಾಕೋಕೆ ಮರೆಯೋರಲ್ಲ. ಇಂತವರ ಮಧ್ಯದಲ್ಲಿ ಬದುಕೋದಿದ್ಯಲ್ಲ, ಅದೊಂಥರಾ 'Challenging' ಅಂತನ್ನಿಸುತ್ತೆ. ಬರ್ತೀನಿ, ಬರ್ತಿನಿ ಅಂತಾನೆ ಕೈ ಕೊಡೋ ಜನ ಇವರು. ಬಹುಶಃ ನಮ್ಮನ್ನ 'Life'ನಲ್ಲಿ ಗಟ್ಟಿ ಮಾಡೋದು ಇಂತವರೇ. ತಲೆ ಮೇಲೆ ಚಪ್ಪಡಿ ಕಲ್ಲು ಎಳೆದವರ ಮುಂದೆ ಮತ್ತಷ್ಟು, ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕು ಅನ್ನೋ ಹಟಕ್ಕೆ ಬೀಳುತ್ತೀವಲ್ಲ : ಆ ಹಟವೇ ನಮ್ಮ ಬದುಕಿಗೊಂದು 'ಫೈನ್' ಆದ ದಾರಿ ತೋರಿಸುತ್ತೆ. ನಗೋರ ಮುಂದೆ ಅಳೋದು ನಿಷಿಧ್ದ ಅಲ್ವಾ? ಹಾಗಾಗಿ ಅಳೋ ಪ್ರಸಂಗ ಬರದಂತೆ ಗುದ್ದಾಡಿ ಜೀವನ ನಡೆಸುತ್ತೀವಿ. ಯಾವುದೋ ಕಷ್ಟಕ್ಕೆ ಹೆದರಿ ಮೂಲೆಗೆ ಸೇರುವ ಮುನ್ನ ಇಂತವರ ನೆನಪಾಗುತ್ತೆ, ಛೇ., ಗೊತ್ತಾದ್ರೆ ನಗ್ತಾನಲ್ಲಪ್ಪ ಅಂತ ಭಯ ಶುರುವಾಗುತ್ತೆ. ಆ ಭಯವೇ ನಾವು ಕೆಲಸಕ್ಕೆ ಹಚ್ಚಿಕೊಳ್ಳುವಂತೆ ಕಚ್ಚುತ್ತೆ. ದೇಹಕ್ಕೆ ರೆಸ್ಟ್ ಬೇಕು ಅಂದ್ಕೊಂಡ್ರು ಮನಸ್ಸು ಬೇಡ ಅನ್ನುತ್ತೆ. ಗುರಿ ಮುಟ್ಟೋವರೆಗೂ ನೋ ರೆಸ್ಟ್ ಅನ್ನುತ್ತೆ. ಉಸಿರು ಬಿಗಿ ಹಿಡಿದು ಅಣಿಯಾಗುತ್ತೀವಿ. ಮಾಡೋ ಕೆಲಸದಲ್ಲಿ ಸೋತರೂ, ಬಿದ್ದರೂ ಮತ್ತೆ , ಮತ್ತೆ ಏಳುತ್ತೀವಿ, ಎದ್ದು ಬೀಳುತ್ತೀವಿ, ಬಿದ್ದು ಏಳುತ್ತೀವಿ. ಕೊನೆಗೊಂದು ದಿನ ನಾವು ‌ಹಾಕಿಕೊಂಡ 'ಗುರಿ' ಅಲ್ಲೇ ಪಕ್ಕದಲ್ಲೆಲ್ಲೋ ನಮ್ಮನ್ನೇ ಕಾಯೋ ಹಾಗೆ ಕೂತಿರುತ್ತೆ. ಹತ್ತಿರ ಬಾ ಅಂತ ಕೈ ಚಾಚುತ್ತೆ. ಉಸ್ಸಪ್ಪಾ .... ಸ್ಟಾಪ್ ಬಂತು ಅಂತ ಸ್ವಲ್ಪ Relax ಆದಿರೋ ಕತೆ ಮುಗಿತು. ಇಷ್ಟು ದಿನ ಪಟ್ಟ ಆ ಶ್ರಮ ಹೇಳ ಹೆಸರಿಲ್ಲದೇ ವ್ಯರ್ಥವಾಗಿಬಿಡುತ್ತೆ. ಮತ್ತೆ ಎಲ್ಲವನ್ನೂ ಮೊದಲಿಂದ ಶುರು ಮಾಡಬೇಕಾಗುತ್ತೆ. ಹಾಗಾಗಿ ಗುರಿ ಮುಟ್ಟಿ ಜೈ ಅನ್ನುವ ತನಕವೂ ಒಂದಿಂಚೂ ವಿಚಲಿತರಾಗಕೂಡದು. ಅನುಮಾನ, ಅವಮಾನ , ನೋವು, ದುಃಖ ಎಲ್ಲರ ಬದುಕಲ್ಲೂ ಇದ್ದದ್ದೇ. ಸೋಲದೇ ನೀವು ಗೆಲ್ಲುತ್ತೀರಿ ಅಂತಾದರೆ, ನೀವು ಅಯ್ದುಕೊಂಡ ದಾರಿ ಸರಿಯಾಗಿಲ್ಲ ಅಂತ. ಹೂವಿನ ಪಥದಲ್ಲಿ ನಡೆಯೋದು ಸುಲಭ. ಅದರೆ ಕೊನೆಗೊಂದು ದಿನ ಮುಗ್ಗರಿಸಿದಾಗ ಮಾತ್ರ ಎಲ್ಲವೂ ಯಾತನಾಮಯವೇ. ಇಷ್ಟು ದಿನ ನಡೆಸಿಕೊಂಡು ಬಂದ ಹಾದಿ ಯಾವತ್ತಿಗೂ ನಮ್ಮನ್ನ ಕೈ ಹಿಡಿದು ಎತ್ತೋದಿಲ್ಲ. ಯಾಕೆಂದರೆ ಬರೀ ಸುಖವನ್ನೇ ಉಂಡ ನಮಗೆ, ಕಷ್ಟ ಬಂದಾಗ react ಮಾಡೋದು ಹೇಗೆ ಅನ್ನೋದನ್ನ ಕಲಿಸಿಕೊಟ್ಟಿರಲ್ಲ. ಅಂಥಹ ಹಾದಿಯಲ್ಲಿ ಅಸಲೀ ಜೀವನದ ಪರಿಚಯವೇ ನಮಗಾಗಿರುವುದಿಲ್ಲ. ಇನ್ನು ಪಾಠವಾದರೂ ಎಲ್ಲಿಂದ ಕಲಿತೇವು? ಹಾಗಾಗಿ ಹಾದಿ ಸುಗಮವಾಗಿದೆ ಅಂತನ್ನಿಸಿದರೆ, ನಿಂತ ಕಡೆಯೇ ಒಂದಷ್ಟು ಹೊತ್ತು ನಿಂತು ವಿಮರ್ಶಿಸಿಕೋಳ್ಳೋದು ಒಳಿತು. ಸರಿ ಅಂತನ್ನಿಸದರೆ ಸರಿ, ತಿರುಗಿ ನೋಡದೆಯೂ ಮುಂದೆ ಓಡಿ ಹೋಗಿ ಗಮ್ಯ ತಲುಪಿಕೊಳ್ಳುವ. ತಪ್ಪಿಲ್ಲ. But ಇಷ್ಟೇ ಇಷ್ಟು ತಪ್ಪೆಂದರೂ ಮುಂದೆ ನಡೆಯೋದೇ ಬೇಡ. ಎಲ್ಲವನ್ನೂ ಮರೆತು ಮತ್ತೊಂದು ಶುದ್ಧ ಸಾಹಸಕ್ಕೆ ಕೈ ಹಾಕುವ. ಹೊಸತೊಂದು ಹೋರಾಟಕ್ಕೆ ನಮ್ಮನ್ನ ಅಣಿ ಮಾಡಿಕೊಳ್ಳುವ. ಗಾಳಿ, ಮಳೆ, ಸುನಾಮಿ, ಬರ, ಕ್ಷಾಮ, ನೋವು, ದುಃಖ , ಅವಮಾನ ಯಾವುದೇ ಎದುರಾಗಲಿ, ಎಲ್ಲದಕ್ಕೂ ಒಂದು ಗುದ್ದು ಕೊಡುವ ಮನಸ್ಸಿನ್ನ ತಯಾರಿಸಿಕೊಳ್ಳುವ. ಒಂದು ಶುದ್ಧ ದಂಡಯಾತ್ರೆಯಂತೆ , ಛಲದಿಂದ ಬಡಿದಾಡುವ. ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕೆಂದರೆ ಇದೆಲ್ಲವನ್ನ ಮಾಡಲೇಬೇಕು. No Excuse. ಇಷ್ಟಲ್ಲಾ ಅದ ಮೇಲೂ 'ಜಯ' ದಕ್ಕದೇ ಇದ್ದೀತಾ? ದಕ್ಕಲೇಬೇಕು. ಯಾಕೆಂದರೆ, ಇದೊಂದು ಕ್ಷಣಕ್ಕೊಸ್ಕರ ನಮ್ಮ ಇಡೀ ಬದುಕನ್ನ ಬಸಿದಿರುತ್ತೀವಲ್ಲ. ದಕ್ಕೇ ದಕ್ಕುತ್ತದೆ. ಅಲ್ಲಿಯವರೆಗೆ ಉಸಿರು ಬಿಗಿ ಹಿಡಿದು ಓಡೋದರಲ್ಲೇ ಇರೋದು, Life'ನ ನಿಜವಾದ 'ಥ್ರಿಲ್'.

Friday 28 August 2015

ಸ್ವಚ್ಚ ಭಾರತ್ ಅಂದ್ರೆ ಕಾಂಗ್ರೆಸ್ ಮುಕ್ತ ಭಾರತ್ ಅಂತಾನಾ?


ಅಯ್ಯೋ! ರಾಮ! ರಾಮ! ಇದು ಎಂತಾ ಲೋಕವಯ್ಯ?
ವಿದ್ಯಾವಂತರ್ಯಾರೂ Voting ಮಾಡಿಲ್ವಂತೆ, ಅವರು ಬಿಜೆಪಿ ಪರ ಇರೋದ್ರಿಂದ ಕಾಂಗ್ರೆಸ್'ಗೆ ಗೆಲುವಂತೆ. ಇದ್ಯಾವ ಸೀಮೆಯ Calculation'ನ್ನೋ, ಸಮೀಕ್ಷೆಯೋ? ಅಂದ್ರೆ, ಇಷ್ಟು ದಿನ ಕಾಂಗ್ರೆಸ್'ಗೆ Vote ಮಾಡಿದವ್ರೆಲ್ಲಾ ಬುದ್ದುಗಳಾ? ಸ್ಟೇಟ್'ಮೆಂಟ್ ಕೊಡೋಕೂ ಒಂದು ತಲೆ ಬೇಡ್ವಾ? ಇದನ್ನ ನೋಡಿದ್ರೆ ಗೊತ್ತಾಗಲ್ವಾ ಇವರ ಹಣೆಬರಹ.
ಅನ್ನ ಭಾಗ್ಯ ಕೊಟ್ಟ್ರಿ, ಎಣ್ಣೆ ಭಾಗ್ಯ ಕೊಟ್ಟ್ರಿ, ಶಾದಿ ಭಾಗ್ಯ (ಅದೂ For selected People Only) ಕೊಟ್ಟ್ರಿ. ಎಲ್ಲಾ ಭಾಗ್ಯ ಕೊಟ್ರೂ ಜನ ಮಾತ್ರ ಇವರಿಗೆ BBMP ಭಾಗ್ಯ ಕರುಣಿಸಿಲ್ಲ, ಕರುಣಿಸಲ್ಲ. ಅಂದ ಹಾಗೆ, ಈ ಬಾರಿ ಅವಿದ್ಯಾವಂತವರು ಕಾಂಗ್ರೆಸ್'ಗೆ ವೋಟ್ ಮಾಡಿಲ್ಲ ಅಂತಲ್ಲ. ಎಲ್ಲರೂ ವಿದ್ಯಾವಂತರೆ, ಅವರಿಗೆ ಈಗೀಗ ಅರ್ಥ ಆಗೋಕೆ ಶುರು ಆಗಿದೆ ಇವರೆಲ್ಲಾ ಡೋಂಗಿಗಳು ಅಂತ. ಈ ಡೋಂಗಿಗಳಿಂದ ಇನ್ನೇನನ್ನೂ ನಿರೀಕ್ಷಿಸೋದು ಕಷ್ಟ ಅಂತ ಗೊತ್ತಾದಾಗ ಒಂದೊಳ್ಳೆ ನಿರ್ಧಾರಕ್ಕೆ ಕೈ ಚಾಚಿದ್ದಾರೆ.
ಮತ್ತೆ ಮತ್ತೆ ಕಾಂಗ್ರೆಸ್ ಮುಗ್ಗರಿಸುತ್ತಿದೆ, ಕಾಂಗ್ರೆಸ್ ಪಾಲಿಗೆ ಇದು ಬರಲಿರುವ ಕಡೆಯ ದಿನಗಳ ಮುನ್ಸೂಚನೆ, But for Nation ಶುಭ್ರ ಸುವರ್ಣಯುಗಕ್ಕೆ ಅಣಿಯಾಗುವ ಹೊತ್ತಷ್ಟೆ. ಯುಗ ಸಂಧಿಕಾಲ. ತಾನೇ ತನ್ನ 'ಕೈ'ಯಾರೆ ತೋಡಿಕೊಂಡ ಖೆಡ್ಡಾಕ್ಕೆ ಬಿದ್ದ ಕಾಂಗ್ರೆಸ್ ಏಳೋದಂತೂ ಅನುಮಾನವೆ. ಬಿದ್ದ ಇವರುಗಳು ಅದೆಷ್ಟು ಕಾಲ ನೆಲ ಕಚ್ಚಿಕೊಂಡಿರುತ್ತಾರೋ ಅಷ್ಟೂ ದಿನಗಳು ದೇಶದ ಪಾಲಿಗೆ ಸುವರ್ಣಯುಗವಾಗೋದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ ಒಂದಂತೂ ನಿಜ - ಮೋದಿಯ 'ಸ್ವಚ್ಚ ಭಾರತ್ ಅಭಿಯಾನ'ದಲ್ಲಿ ತಮ್ಮನ್ನ  ಹಚ್ಚಿಕೊಂಡ ಜನರು ಕಸ ಯಾವುದೆಂದು ನಿರ್ಧರಿಸಿಯಾಗಿದೆ. ಕಸ ಅಂತಾದ ಮೇಲೆ ಇಟ್ಟುಕೊಂಡೇನು ಬಂತು? ಈ ಕಸದಿಂದ ರಸವಾದರೂ ಆದೀತಾ? ಉಹೂಂ.,  ಅದಕ್ಕೂ ಲಾಯಕ್ಕಿಲ್ಲ ಅಂದ ಮೇಲೆ ಬಿಸುಟು ಬೆಂಕಿ ಕೊಡೋದಷ್ಟೇ ಉಳಿದಿರೋದು. ಬೆಂಗಳೂರಿನ ಜನತೆ ಅದನ್ನೇ ಮಾಡಿದ್ದಾರೆ. Yes., Just a ಕಸ ವಿಲೇವಾರಿ.

ಪಕ್ಕಾ Perfect ಆಗಿ ಹೇಳೋಕೆ ಹೋದರೆ ನಾವಿಡುತ್ತಿರುವ ಹೆಜ್ಜೆ - Towards ಕಾಂಗ್ರೆಸ್ ಮುಕ್ತ ಭಾರತ್ , and ಆಫ್'ಕೋರ್ಸ್ ಸ್ವಚ್ಚ ಬಾರತ್.

Tuesday 9 June 2015

ಬದುಕನ್ನ ಬರೀ ಬದುಕಿಬಿಡುವುದಲ್ಲ! ಕಟ್ಟಿಕೊಳ್ಳಬೇಕು!

ಬದುಕು ಅದೆಷ್ಟೋ ಸಲ ಬೇಡವಾದಷ್ಟು ರೇಜಿಗೆ ಹುಟ್ಟಿಸಿಬಿಟ್ಟಿರುತ್ತೆ! ಇನ್ನು ಬದುಕೋದೇ ಬೇಡ ಅನ್ನುವಷ್ಟರ ಮಟ್ಟಿಗೆ. ಜೀವನದ ಅಷ್ಟೂ ಬಾಗಿಲುಗಳು ದಢಾರನೆ ಮುಚ್ಚಿಕೊಂಡಂತೆ. ಅಲ್ಲೆಲ್ಲೋ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದಂತೆ. ತೇಲುತ್ತಿದ್ದ ಬದುಕು  ಮುಳುಗಿಯೇ ಹೋದಂತೆ . ಮತ್ತೆ ಏನು ಅಂದರೆ ಏನೂ ಉಳಿದಿಲ್ಲ ಅನ್ನೋ ಹಾಗೆ.

ಇಷ್ಟೆಲ್ಲಾ ಆದ ಮೇಲೂ ಅಲ್ಲೆಲ್ಲೋ ದೂರದಲ್ಲಿ ಕಂಡ ಸಣ್ಣ ಮಿಣುಕಿನಂತ ದೀಪ ಮತ್ತೆ ನಮ್ಮನ್ನ ದಡ ಸೇರಿಸಿರುತ್ತೆ. ನಮಗೇ ಗೊತ್ತಾಗದಂತೆ ಬದುಕು ಒಂದು 'Track' ತಲುಪಿರುತ್ತೆ. ಇಷ್ಟವೋ, ಕಷ್ಟವೋ ಬದುಕಬೇಕು ಅನ್ನೋ ಹಂಬಲ ಚಿಗುರಿಸೋ ಅನೇಕ 'Reason'ಗಳು ಕದ ತಟ್ಟೋಕೆ ಶುರುವಿಟ್ಟುಕೊಂಡಿರುತ್ತೆ. ಅಲ್ಲಿ ಜೀವಕ್ಕೆ ಜೀವ  ಕೊಡೋ ಗೆಳೆಯರಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನು ಬೆಳೆಸಿದ ಹೆತ್ತವರಿರುತ್ತಾರೆ. 'Without Reason' ಕಿತ್ತಾಡುವ ಮುದ್ದಿನ ತಂಗಿ ಇರುತ್ತಾಳೆ. ಒಬ್ಬ 'ಫ್ರೆಂಡ್'ಗಿಂತ ಜಾಸ್ತಿ ನಮ್ಮನ್ನ ಅರ್ಥ ಮಾಡಿಕೊಳ್ಳಬಲ್ಲ ಅಣ್ಣ'ನಿರುತ್ತಾನೆ. ಸುಮ್ಮನೇ ಬೈಯುವ 'ಪರಮ ಶತ್ರು'ವಿನಂತ ಹಿತೈಷಿಯಿರುತ್ತಾನೆ. ಬದುಕಿನಲ್ಲಿ ನಾವು ಮುಂದೆ ಮಾಡಬಹುದಾದ 'ತಪ್ಪು'ಗಳನ್ನ ಈ ಹಿಂದೆಯೇ 'ಜ್ಯೋತಿಷಿ'ಯಂತೆ ಕಡ್ಡಿ ಮುರಿದಂತೆ ಹೇಳಿದ 'ಗುರು'ವಿನ ನೆನಪಿರುತ್ತೆ. ನೀನ್ಯಾವತ್ತೂ 'ಉದ್ದಾರ' ಆಗಲ್ಲ ಅನ್ನೋದನ್ನ ಸ್ವಲ್ಪ ಖಾರವಾಗೇ ಹೇಳಿದ 'ಟೀಚರ್' ಹಾಗೇ ಸುಮ್ಮನೆ ನೆನಪಿನ ಲಹರಿಯಲ್ಲಿ ಹಾದು ಹೋಗುತ್ತಿರುತ್ತಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ನಾವೇ ಹಾಕಿಕೊಂಡ ಒಂದು ಗುರಿ., ಅಸ್ಪಷ್ಟ ಬದುಕಲ್ಲೂ 'ಸ್ಪಷ್ಟವಾದ ದಾರಿಯನ್ನ ತೋರಿಸಿರುತ್ತೆ.   ಹೇಳೋಕೆ ಹೊರಟರೆ 'List' ಹನುಮಂತನ ಬಾಲದಷ್ಟಾಗುತ್ತೆ. ಇವೆಲ್ಲವೂ ನಾವು ಬದುಕಲೇಬೇಕು ಅನ್ನೋದನ್ನ ಮತ್ತೆ ಮತ್ತೆ ಕೂಗಿ ಹೇಳುತ್ತಿರುತ್ತವೆ.

'ಲೈಫು' ಇಷ್ಟೇನಾ ? ಅಂತ ಸಂಕುಚಿತಗೊಂಡರೆ., ಅಷ್ಟೇ ಅಂತನ್ನಿಸುತ್ತೆ.  ಇನ್ನಷ್ಟು ಇದ್ಯಾ ಅಂತ 'ಶೋಧ'ಕ್ಕಿಳಿದರೆ, ಬಗೆ ಬಗೆಯ ಸೊಗಸುಗಳು ಗೋಚರಿಸುತ್ತವೆ.

ಇಷ್ಟಕ್ಕೂ ಈ 'ಲೈಫ್'ನ್ನ ಬದುಕಬೇಕಾದವರು ನಾವು ಮಾತ್ರ. Nobody is experienced more about your LIFE than YOU. ಓಡೋದಕ್ಕೆ ಸಾಧ್ಯ ಇಲ್ಲ ಅಂತಾದರೆ, ನಡೆಯಬೇಕು. ನಡೆಯೋದೂ ಕಷ್ಟವಾದರೆ ತೆವಳಬೇಕು. ಏನೇ ಅದರೂ 'ಗಮ್ಯ'ದೆಡೆಗೆ ಚಲಿಸುತ್ತಿದ್ದೀನಿ ಅನ್ನೋದನ್ನ ಖಾತ್ರಿ ಮಾಡಿಕೊಳ್ಳಬೇಕು. ಒಂದು ಶುದ್ಧವಾದ ಬದುಕಿಗೆ ಚಂದದ ಅಡಿಪಾಯ ನಾವೇ ಕಟ್ಟಿಕೊಳ್ಳಬೇಕು. ಅದರ ಮೇಲೆ ಮಹಲೋ? ಗುಡಿಸಲೋ ಅದು ನಮ್ಮ ಕೈಯ್ಯಲ್ಲಿರೋದು.  ಮಹಲು ಕಟ್ಟೋವರೆಗಾದರೂ ಆಶ್ರಯಕ್ಕಾಗಿ ಚಿಕ್ಕದಾದ , ಚೊಕ್ಕದಾದ ಗುಡಿಸಲು ನಮ್ಮದಾಗಿರಬೇಕು. (ಮಲಗೋ ಮನೆಯ ಬಗ್ಗೆ ಮಾತಾಡುತ್ತಿಲ್ಲ).

ಕಲಾಂ ಹೇಳಿದ ಮಾತು ಕ್ಷಣ ಕ್ಷಣಕ್ಕೂ ನೆನಪಾಗಬೇಕು. ನಿದ್ದೆಗೆ ಜಾರಿದಾಗ ಕಾಣೋದು 'ಕನಸಲ್ಲ'. ನಿಜವಾದ ಕನಸು ನಿಮ್ಮನ್ನ ನಿದ್ರಿಸೋಕೂ ಬಿಡೋದಿಲ್ಲ. ಅಂತದ್ದೊಂದು ಕನಸನ್ನ ಬಗಲಲ್ಲಿ ತೂಗಿಸಿಕೊಂಡಿರಬೇಕು. ಕುಂತರೂ, ನಿಂತರೂ, ಮಲಗಿದರೂ ಆ ಕನಸೇ ನಮ್ಮನ್ನ ಕಾಡುವಂತಿರಬೇಕು. ಕನಸು ಕೈಗೂಡುವ ಮುನ್ನ ಚೂರೇ ಚೂರು 'ರೆಸ್ಟ್' ಮಾಡುತ್ತೀನಿ ಅನ್ನೋ ಭಾವ ಮನಸ್ಸಿನ ಹತ್ತಿರಕ್ಕೂ ಸುಳಿಯಬಾರದು. ಈ ಬದುಕನ್ನ ಶುದ್ಧ ತಪಸ್ಸಿನಂತೆ ಆಚರಿಸಿಕೊಳ್ಳಬೇಕು. ತಪೋ ಭಂಗಕ್ಕೆಂದೇ ಹಿಂಡಾಗಿ  ಬರುವ ಮೇನಕೆ(ಹೆಣ್ಣು ಅಂತಲ್ಲ)ಗೆ ನಮ್ಮ ಶೃದ್ಧೆಯನ್ನ ಕದಿಯೋ ಅವಕಾಶ ಕೊಡಲೇಬಾರದು. ಒಬ್ಬ ದಾರ್ಶನಿಕ ಅಂದಂತೆ, ನಾವಿಡುವ ಹೆಜ್ಜೆ ಅದೆಷ್ಟು ಧೃಢವಾಗಿರಬೇಕೆಂದರೆ 'ಮರಳುಗಾಡಲ್ಲಿ ಊರಿದ ಹೆಜ್ಜೆಯೂ ಅನೇಕ ದಶಕಗಳ ಕಾಲ ಅಳಿಯದಂತಿರಬೇಕು.
ಆಂಜನೇಯನಂತೆ ಹಿಮಾಲಯ ಎದುರು , ಅದಕ್ಕಿಂತಲೂ ದೈತ್ಯವಾಗಿ ಬೆಳೆದು ನಿಲ್ಲಬೇಕು. ಎಲ್ಲಿಯವರೆಗೆ ನಾವು ಚಿಕ್ಕವರಾಗಿ ಉಳಿಯುವುತ್ತೆವೋ ಅಲ್ಲಿಯವರೆಗಷ್ಟೇ ಹಿಮಾಲಯ (Problem) ದೊಡ್ಡದು. ನಾವೇ ಬೆಳೆದು ನಿಂತರೆ, Problems ಇನ್ಯಾವ ಲೆಕ್ಕ? ಕಷ್ಟಗಳಿಗೆ ಬೆನ್ನು ತೋರಿಸಿ ಓಡೋದು ಸರಿಯಲ್ಲ ಅಂತ ನಮ್ಮೊಳಗೇ ಒಂದು Rule ಮಾಡಿಕೊಳ್ಳಬೇಕು. ಜಗ್ಗದೇ, ಕುಗ್ಗದೇ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸೋತ ಸೋಲು ಯಾವತ್ತಿಗೂ ನಮ್ಮನ್ನ ಕುಗ್ಗಿಸಬಾರದು. ಅಷ್ಟಕ್ಕೂ ಅಂತದ್ದೊಂದು ಸೋಲು ನಾನು ಕಂಡೇ ಇಲ್ಲ ಎಂಬಂತೆ ಮರೆತುಬಿಡಬೇಕು. ಆದರೆ ಸೋಲು ಮರೆತರೂ ., ಸೋಲಿನ ಆ ಪಾಠ...? ಅದು ಮರೆಯೋದು ನಿಷಿದ್ದ. ಅಂಥದ್ದೊಂದು ಸೋಲು ಮತ್ತೆ ಎದುರಾಗದು ಅನ್ನೋದನ್ನ ಪಕ್ಕಾ ಮಾಡಿಕೊಳ್ಳಬೇಕು. ಎಡವಿದ ಜಾಗದಲ್ಲೇ ಮತ್ತೆ ಎಡವಿದರೆ., ಪ್ರಯೋಜನವೇನು? ಗೆಲುವಿನ ಹಪಾಹಪಿತನ ಎಂದಿಗೂ ಕುಂದಬಾರದು. ಮಾಡೋ ಪ್ರಯತ್ನಗಳಲ್ಲಿ ಒಂದಿನಿತೂ ಹಿಂಜರಿಕೆ ಇರಕೂಡದು.

ಸೋಲುತ್ತ ಸೋಲುತ್ತ ., ಗೆಲುವಿನ ಪಕ್ಕಕ್ಕೆ ಜಾರಿಕೊಳ್ಳಬೇಕು. ಗಮ್ಯಕ್ಕೆ ಹತ್ತಿರವಾದಾಗ 'ಗೆಲುವೇ' ನಮ್ಮನ್ನು ಎತ್ತಿ ದಡ ಸೇರಿಸಿರುತ್ತೆ.  ಅಲ್ಲಿಗೆ 'ಲೈಫ್ ಹ್ಯಾಪಿ ಎಂಡಿಂಗ್ ಆಗೋದು ಗ್ಯಾರಂಟಿ.

'ಎಲ್ಲರಿಗೂ ಶುಭವಾಗಲಿ'

- ಶ್ರೀಕಾಂತ್ ಆಚಾರ್ಯ

Monday 8 June 2015

2014 ರ 'ಜನ'Worry' ಯಲ್ಲಿ ಗೀಚಿದ್ದು!!!

ಮತ್ತೊಂದು ವರ್ಷ ಕಳೆದಿದೆ, ಹೊಸ ವರ್ಷವನ್ನು ಸ್ವಾಗತಿಸಿದ್ದೂ ಆಗಿದೆ. . ಗತಿಸಿದ್ದೆಲ್ಲವೂ ಇತಿಹಾಸ ಅನ್ನೋದಾದರೆ 2103 ಕೂಡ ಈಗ ಇತಿಹಾಸ. ಈಗ 2013 ಬರೀ ನೆನಪಷ್ಟೇ.

ಇಂತ ನೆನಪುಗಳಲ್ಲಿ, ಒಂದಷ್ಟು  ಸಿಹಿ ನೆನಪುಗಳನ್ನ ಮೆಲುಕು ಹಾಕುವ ಉತ್ಸಾಹ, ಇನ್ನೊಂದಷ್ಟು ಕಹಿ ನೆನಪುಗಳನ್ನ ಗಂಟು ಕಟ್ಟಿ ಮನದ ಮೂಲೆಯಿಂದಲೇ ಹೊರಗೆಸೆಯುವ ತವಕ.

ಅಷ್ಟಕ್ಕೂ ಹೊಸ ವರ್ಷ ಬಂದರೆ  ದಿಡೀರನೆ 'ಲೈಫು' ಬದಲಾಗಿಬಿಡುವುದಿಲ್ಲ. ಅದೊಂದು 'Feel' ಅಷ್ಟೇ. ಬೆಟ್ಟ ಹತ್ತುವವನ ಆಯಾಸ ತುದಿ ಏರಿ ನಿಂತಾಗ 'Nil' ಅಂತ ಅನ್ನಿಸಿಬಿಡುತ್ತಲ್ಲ ಆ ತರದ್ದು. ಏನೋ ಸಾದಿಸಿಬಿಟ್ಟಿದ್ದೀನಿ ಅನ್ನೋ ಹೆಮ್ಮೆಯ ಭಾವ. ಮತ್ತೊಂದು ಮೆಟ್ಟಿಲು ಏರಿ ನಿಂತಿದ್ದೀನಿ ಅನ್ನೋ ಸಾರ್ಥಕ್ಯತೆ. ಇಡೀ  ವರ್ಷ ಪಟ್ಟ ನೋವು, ಹತಾಶೆ, ಅವಮಾನ ಎಲ್ಲಕ್ಕೂ  ಒಂದು ಫುಲ್ ಸ್ಟಾಪ್ ಇಟ್ಟು ಬರೀ ಸುಖವೇ ಬರಲೀ ಅಂತ ಬೊಗಸೆಯೊಡ್ಡಿ ಕೂರೋ ಟೈಮು. ಒಂದಷ್ಟು 'Resolution'ಗಳನ್ನ ಮುಂದಿಟ್ಟುಕೊಂಡು ಯುದ್ಧಕ್ಕೆ ಹೊರಟಂತ ಫೀಲ್.   Resolution'ಗಳಿಗೆ ಇಂತದ್ದೇ ದಿನ ಅಂತೇನೂ ಇಲ್ಲ. ಬರ್ಥ್ ಡೇ', Anniversary', ಕೆಲವೊಂದು ಸ್ಪೆಷಲ್ ದಿನಗಳಂದು Resolution'ಗೆ ಎಡತಾಕುವವರಿದ್ದಾರೆ. ಆದರೆ 'ನ್ಯೂ ಇಯರ್' Resolution' ಅನ್ನೋದು ಎಲ್ಲರೂ ಸಮೂಹ ಸನ್ನಿಗೆ ಒಳಗಾದವರಂತೆ ಒಟ್ಟಿಗೇ ಎದೆಗಪ್ಪಿಕೊಳ್ಳುವ ನಿರ್ಧಾರಗಳಷ್ಟೆ.

ಆ resolution'ಗಳು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಅನ್ನೋದು ನಮಗೂ ಖಚಿತವಿರುವುದಿಲ್ಲ. ಇಷ್ಟರ ಹೊತ್ತಿಗೆ ಬಹುತೇಕರ Resolution'ಗಳು ಕಳಚಿ ಬಿದ್ದಿರುತ್ತವೆ.  ಇವತ್ತೇ ಕೊನೆ ಇನ್ಯಾವತ್ತೂ ಸೀಗರೇಟೇ ಮುಟ್ಟಲ್ಲ ಅಂತ ಪ್ಯಾಕು'ಗಟ್ಟಲೆ ಸೀಗರೇಟು ಹೊಡೆದವರು ಬೆಳಗ್ಗೆದ್ದು ಮತ್ತದೇ ಸೀಗರೇಟನ್ನ ತುಟಿಗಂಟಿಸಿಕೊಂಡೇ ದಿನ ಶುರುವಿಟ್ಟುಕೊಳ್ಳುತ್ತಾರೆ. ಕೊನೆಯ ಸಲ 'ಡ್ರಿಂಕ್ಸ್' ಮಾಡುತ್ತಿದ್ದೀನಿ ಅಂತ 'ಫುಲ್ ಬಾಟಲ್' ಕುಡಿದೋರು ಬೆಳಿಗ್ಗೆ 'ಹ್ಯಾಂಗೋವರ್'ನಿಂದ ಹೋರ ಬರಬರೋದಕ್ಕೆ ಅಂತ ಒಂದು 'ನೈಂಟಿ' ಇಳಿಸಿಕೊಂಡಿರುತ್ತಾರೆ. ನಾಳೆಯಿಂದ ಬಡವರಿಗೆ ಸಹಾಯ ಮಾಡ್ತೀನಿ ಅಂತ ಡಿಸೈಡ್ ಮಾಡಿದೋರು,  ಕಂಕುಳಲ್ಲಿ ಮಗು ಸಿಕ್ಕಿಸಿಕೊಂಡು ಸಿಗ್ನಲ್'ನಲ್ಲಿ ಬಿಕ್ಷೆ ಬೇಡೋ ಬಡಪಾಯಿಯ ಹೆಂಗಸಿನ ಕಡೆಗೆ ಕಣ್ಣೆತ್ತಿಯೂ ನೋಡದಷ್ಟು ಸ್ವಾರ್ಥಿಗಳಾಗಿಬಿಟ್ಟಿರುತ್ತೀವಿ. (ಹಾಗಂತ ಸಿಗ್ನಲ್'ನಲ್ಲಿ ಬಿಕ್ಷೆ ಬೇಡೋರೆಲ್ಲಾ ಬಡವರೂ ಅಂತಲ್ಲ, ಬಿಕ್ಷೆ ಬೇಡಿಯೇ ಬಂಗಲೆ ಕಟ್ಟಿದವರಿದ್ದಾರೆ). ಬೆಳಿಗ್ಗೆ ಜಾಗಿಂಗ್ ಹೋಗ್ತೀನಿ ಅಂದವರೂ ತಪ್ಪಿಯೂ ಬೇಗ ಎದ್ದಿರುವುದಿಲ್ಲ.

 ನಾಳೆಯಿಂದ ಸಿಕ್ಕಾಪಟ್ಟೆ 'ಪ್ಲ್ಯಾನ್ಡ್' ಆಗಿ ಬದುಕುತ್ತೀನಿ ಅಂದುಕೊಂಡೋರಿಗೆ ಬೆಳಗ್ಗಿನ 'ಅಲಾರಾಂ' ಸದ್ದು ಕೇಳದಷ್ಟು, ಕೇಳಿದರೂ ಎತ್ತಿ ಬಿಸಾಡೊವಷ್ಟು ಬೇಜಾರಾಗಿಬಿಟ್ಟಿರುತ್ತೆ. ಎದ್ದು ಕುಳಿತರೆ ಮತ್ತದೇ Routine' ಲೈಫು'. ಅದೇ ಮನೆ, ಅದೇ ಬೈಕು, ಅದೇ ಕಾರು, ಅದೇ ಬಸ್ಸು, ಅದೇ ರೂಟು, ಮತ್ತದೇ ಆಫೀಸು. ಥತ್,  ಊಹುಂ,  ಏನು ಅಂದರೆ ಏನೂ ಬದಲಾಗಿರುವುದಿಲ್ಲ. ಇನ್ನೊಂದು Resolution' ಕಟ್ಟಿಕೊಳ್ಳೋಣ  ಅಂದರೆ ಅದಾಗಲೇ ನ್ಯೂ ಇಯರ್ ಸಂಭ್ರಮಾನೂ ಮುಗಿದುಬಿಟ್ಟಿರುತ್ತೆ. ಮತ್ತೊಂದು ವರ್ಷ ಕಾಯಬೇಕು. ಸರಿ ಬಿಡು ಅಂತ ಸಮಾಧಾನ ಮಾಡಿಕೊಂಡು ಮತ್ತದೇ ಹಳಿಯ ಮೇಲೆ ಜೀವನ ನಡೆಸಲು ಅಣಿಯಾಗಿಬಿಡುತ್ತೀವಿ. ಅಲ್ಲಿಗೆ ಹೊಸ ವರ್ಷವೂ ಹಳೆಯದು ಅಂತ ಅನಿಸೋಕೆ ಶುರುವಾಗಿಬಿಟ್ಟಿರುತ್ತೆ.

ಬಹುಷಃ ಅದಕ್ಕೇ ಯಾರೋ ಹೇಳಿದ್ದು, ಹೊಸ ವರ್ಷದಂದು ತೆಗೆದುಕೊಳ್ಳಬಹುದಾದ ಬೆಸ್ಟ್ Resolution' ಅಂದರೇ, Resolution' ತೆಗೆದುಕೊಳ್ಳದೇ ಇರೋದು.

-ಶ್ರೀಕಾಂತ್ ಆಚಾರ್ಯ

ಗಾಂಧಿ ಅಂತ ಹೆಸರಿಟ್ಟುಕೊಂಡರೆ ನೀವ್ಯಾರೂ ಮಹಾತ್ಮರಾಗಿ ಬಿಡುವುದಿಲ್ಲ.



ನನಗೇನೂ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಯಾರಿಗೂ ಅನಿವಾರ್ಯವಲ್ಲ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಯಾರಾದರೂ ರಾಷ್ಟ್ರಪಿತ ಯಾರು ಅಂತ ಕೇಳಿದರೆ ಹೆಮ್ಮೆಯಿಂದ ಹೇಳೋದು ಕಷ್ಟವೆನೆಸಿಬಿಟ್ಟಿದೆ. ನಿಜವಾಗಿಯೂ ಗಾಂಧೀಜಿ ರಾಷ್ಟ್ರಪಿತಾ ಹೌದಾ ಅಂಥ ಹೌಹಾರುವಷ್ಟು ಗೊಂದಲಕ್ಕೆ ಬೀಳುತ್ತೀನಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ?

ಗಾಂಧೀ ಬಗ್ಗೆ ಮಾತಾಡುವವರೆಲ್ಲ ಹೇಳೋದೆಂದರೆ 'ಬಾಲ್ಯದಲ್ಲಿ ಗಾಂಧೀ ಅಪ್ಪನ ಕಿಸೆಯಿಂದ ಬಿಡಿಗಾಸು ಕದ್ದದ್ದು ಬಿಟ್ಟರೆ ಮತ್ತೆಂದೂ ತಪ್ಪು ಮಾಡಿಲ್ಲ, ಸುಳ್ಳು ಹೇಳಲಿಲ್ಲ, ಇನ್ನೊಬ್ಬರಿಗೆ ಕೇಡು ಬಯಸಲಿಲ್ಲ' ಅಂತ. ಆದರೆ ಗಾಂಧೀ ಅದರಂತೆಯೇ ನಡೆದುಕೊಂಡಿದ್ದರಾ? ತಪ್ಪೇ ಮಾಡಲಿಲ್ಲವ? ಇನ್ನೊಬ್ಬರನ್ನ ತುಳಿದು ನಿಲ್ಲಲಿಲ್ಲವ?

ನಿಜವಾಗಿಯೂ ಗಾಂಧೀಜಿಗೆ ಭಾರತದ, ಭಾರತೀಯರ ಭವಿಷ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ನೆಹರೂ ಬದಲು 'ಪಟೇಲರು' ಸ್ವತಂತ್ರ ದೇಶದ ಪ್ರಥಮ ಪ್ರಧಾನಿಯಾಗುತ್ತಿದ್ದರು. ಆದರೆ ಹಾಗಾಗಲಿಲ್ಲ, ಗಾಂಧೀಜಿಗೆ ಈ ದೇಶಕ್ಕಿಂತ ನೆಹರು ಭವಿಷ್ಯದ ಬಗ್ಗೆ ಮಹತ್ತರ ಆಸೆಯಿತ್ತೇನೋ. ಅದಕ್ಕಾಗಿ ನೆಹರು ಅವರ ಪಟ್ಟಾಭಿಷೇಕ ನಡೆದೇ ಹೋಯಿತು.

ಅದೇ ಮಹಾತ್ಮ ಮಾಡಿದ ಅತಿ ದೊಡ್ಡ ತಪ್ಪು. ಬಹುಷಃ ನೆಹರೂ ಬಿಟ್ಟು ಇನ್ಯಾರೇ ಪ್ರಧಾನಿಯಾಗಿದ್ದರೂ ಭಾರತ ಇವತ್ತಿಗೆ ನೂರು ವರ್ಷ ಮುಂದೋಡಿ ನಿಂತಿರುತ್ತಿತ್ತು. ಅಲ್ಲಿಂದಲೇ ಶುರುವಾಗಿತ್ತು ಸಿಕ್ಕರೂ ಕಳಕೊಂಡ ಸ್ವಾತಂತ್ರ್ಯ. ಅಧಿಕಾರ ಸಿಕ್ಕ ನಂತರ ನೆಹರೂ ಅನ್ನೋ ರಾಜಕೀಯ ಮುತ್ಸಧ್ಧಿ ಮಾಡಿದ್ದೆಲ್ಲವೂ ಅಯೋಮಯ. ನೆಹರೂಗೆ ಒಬ್ಬ ಜಾಗತೀಕ ವ್ಯಕ್ತಿ ಆಗಬೇಕೆಂಬ ಹಂಬಲವಿತ್ತೇ ವಿನಃ ಬ್ರಿಟಿಷರಿಂದ ಲೂಟಿಯಾಗಿ ಬರಿಗೈಯಲ್ಲಿ ನಿಂತ ಭಾರತವನ್ನ ಮತ್ತೆ ಎತ್ತಿ ಕಟ್ಟಬೇಕೆಂಬ ಇರಾದೆಯೇ ಇರಲಿಲ್ಲ. ದಶಕಗಳ ಕಾಲ ದೇಶವಾಳಿದ ನೆಹರೂ ಆ ಕೆಲಸಕ್ಕೆ ಕೈ ಹಾಕಲೇ ಇಲ್ಲ. ಹಾಗಂತ ಅವರಿಗೆ ಅನ್ನಿಸಲೂ ಇಲ್ಲ. ಇನ್ಯಾವ ಪುರುಷಾರ್ಥಕ್ಕೆ  ಪ್ರಧಾನಯಾಗಬೇಕಿತ್ತು ಸ್ವಾಮಿ? ಇಂದಿಗೂ ಕೂಡ ಗಡಿಯಲ್ಲಿ ಭಾರತದ ಸೈನಿಕ ಪಾಕ್ ದಾಳಿಗೆ ಎದೆಯೊಡ್ಡಿ ಸಾಯುತ್ತಿದ್ದಾನೆಂದರೆ ಅದಕ್ಕೆ ನೇರ ಹೊಣೆ ಗಾಂಧಿ ಮತ್ತು ನೆಹರೂ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಯಾಕೆಂದರೆ ಅವತ್ತು ಹಿಡಿಯಷ್ಟಿದ್ದ ಪಾಕ್ ಸೇನೆಯನ್ನ ಇನ್ನೇನು ಮುಗಿಸಿಬಿಡಬೇಕು, ಅದಿಷ್ಟು ಭೂ ಭಾಗವನ್ನ ನನ್ನದು ಅಂತ ಸಾರುವ ಹೆಮ್ಮೆಯ ಕ್ಷಣ ಹತ್ತಿರವಾದಾಗ ನೆಹರೂ ಅನ್ನೋ ಉದ್ಧಟತನದ ಪ್ರಧಾನಿ 'ಯುದ್ಧ ನಿಲ್ಲಿಸಿ, ನಾನಿದನ್ನ ಸಂಯುಕ್ತ ರಾಷ್ಟ್ರ ಸಭೆಯಲ್ಲಿ ಬಗೆಹರಿಸಿಕೊಳ್ಳುತ್ತೇನೆ' ಅಂದು ಬಿಟ್ಟಿದ್ದರು. ಅಲ್ಲದೇ ಹೋಗಿದ್ದರೆ ಪಾಕಿಸ್ತಾನ ಇವತ್ತಿಗೆ ಕನಸಿನಲ್ಲಿಯೂ ಕಾಶ್ಮೀರದ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಇಂತಹ ನೆಹರೂವನ್ನ ಗಾಂಧೀ ನಂತರ 'ಗಾಂಧೀ ಮಾತನ್ನ' ಆಡಬಲ್ಲ ವ್ಯಕ್ತಿ ಅಂದರು. ನಿಜಕ್ಕೂ ನೈಜವೇ ಆಗೋಯ್ತು ನಂಬಿಕೆ. ಗಾಂಧೀ ಮಾತನ್ನೇ ಆಡಿದರು ನೆಹರೂ.

ಸುಭಾಷ್ಚಂದ್ರ ಭೋಸ್ ಎಂತಹ ದೇಶಪ್ರೇಮಿಯಾಗಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಆದರೆ ಮಹಾತ್ಮ ಅನ್ನೋ ಮಹಾತ್ಮನಿಗೆ ಅದ್ಯಾವತ್ತೂ ಅರಿವಿಗೇ ಬರಲಿಲ್ಲ. ಇವತ್ತಿಗೂ ನಿಗೂಢ ರಹಸ್ಯದಂತೆ ಉಳಿದಿರೋ ಭೋಸ್ ಮರಣದ ಸುದ್ದಿ ನೆನೆದಾಗೆಲ್ಲ ಮನಸಲ್ಲೊಂದು ವೇದನೆ ಮನೆ ಮಾಡಿ ಬಿಡುತ್ತದೆ. ಇಡೀ ದೇಶವನ್ನ ಒಂದೇ ಕರೆಯಲ್ಲಿ ಒಗ್ಗೂಡಿಸಬಲ್ಲಂತ ಗಾಂಧಿ ಅಂದು ಸುಮ್ಮನೆ ಬಾಯ್ಮುಚ್ಚಿ ಕೂತಿದ್ದು ತಪ್ಪು ಅಂತ ನಿಮಗೆ ಅನ್ನಿಸೋದಿಲ್ವ? ಅವತ್ತು ಭೋಸ್ 'ಸಂಶಯಾಸ್ಪದ ಮರಣದ' ಸುದ್ದಿ ತಿಳಿದಾಗ ಮಹಾತ್ಮ ಹೇಳಿದ್ದೇನು ಗೊತ್ತಾ? ''ಭೋಸ್ ಒಬ್ಬ ದೇಶಪ್ರೇಮಿಯಾಗಿದ್ದ, ಆದರೆ ಆತ ಆರಿಸಿಕೊಂಡ ದಾರಿ ಸರಿಯಾಗಿರಲಿಲ್ಲ'' ಅಂತ. ಅಂದರೆ ಬರೀ ಸತ್ಯಾಗ್ರಹ'ದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಾ? ನಂಬೋದು ಕಷ್ಟ.

ಅಪ್ರತಿಮ ದೇಶಪ್ರೇಮಿ 'ಭಗತ್ ಸಿಂಗ್' ಬಗ್ಗೆಯೂ ಗಾಂಧೀಜಿಗೆ ಇಂತದ್ದೇ ಧೋರಣೆ ಇತ್ತು.

 ಬಹುಷಃ ಇವತ್ತಿನವರೆಗೂ ಕಾಂಗ್ರೆಸ್ ಗೆದ್ದಿದ್ದರೆ ಅದು ಗಾಂಧಿ ಅನ್ನೋ ಹೆಸರನಿಂದ. ಆದರೆ ನಿಜವಾಗಿಯೂ ಇವರು ಗಾಂಧಿ ವಂಶಸ್ಥರಾ? ಇಲ್ಲಾ ಗಾಂಧೀ ವಾದವನ್ನ ಪ್ರಾಣಕ್ಕಿಂತ ಮಿಗಿಲಾಗಿ ಎದೆಗವಚಿಕೊಂಡು ಜೀವಿಸಿದವರಾ? ಊಹೂಂ, ಎರಡೂ ಅಲ್ಲ, ಅಧಿಕಾರದ ಹಪಾಹಪಿತನಕ್ಕಾಗಿ, ಕುಟುಂಬ  ರಾಜಕಾರಣಕ್ಕಾಗಿ ಇಡೀ ದೇಶವನ್ನ ಬಲಿ ಕೊಟ್ಟ ಹುಂಬರಿವರು.

ಕೊನೆಗೂ ಭಾರತ ಮತ್ತೆ ಮೇಲೆಳುತ್ತೆ ಅನ್ನೋ  ಭರವಸೆ ಮೂಡಿದೆ.
ತಾಯಿ ಭಾರತಿ ದುರ್ಗೆಯಂತೆ, ಕಾಳಿಯಂತೆ ಮೈ ಕೊಡವಿ ಎದ್ದು ನಿಲ್ಲೋ ಅಪರೂಪವನ್ನ ಕಣ್ತುಂಬಿಕೊಳ್ಳೊ ಅವಕಾಶ.

ಎಲ್ಲರಿಗೂ ಶುಭವಾಗಲಿ., ಭಾರತ ಜಗದ್ಗುರುವಾಗಲಿ.....

ಶ್ರೀಕಾಂತ್ ಆಚಾರ್ಯ

ಬರೆಯೋದು ಆತ್ಮ ಸಮಾಧಾನದ ವಿಷಯ!

ಮಾಡೋಕೆ ಕೆಲಸ ಏನೂ ಇಲ್ಲ ಅಂದಾಗ ಮಾಡೋ ಕೆಲಸಾನೇ ಇಲ್ಲಿ ಬಂದು ಗೀಚೋದು. ಹಾಗಂತ ಬೇಕಾಬಿಟ್ಟಿ ಬರೆಯೋದು ಅಂತಲ್ಲ, ಇಷ್ಟ ಪಟ್ಟು ಮಾಡೋದರಲ್ಲಿ ಇದೂ ಒಂದು ಅಂತ. ಒಂಥರಾ ಹುಟ್ಟು ಗುಣ ಸುಟ್ಟರೂ ಬಿಡೋದಿಲ್ಲ ಅನ್ನೋ ತರದ್ದು. ಮೊದಲೆಲ್ಲ ಬರೆದದ್ದನ್ನ ನಾನೇ ಓದಿ ಬುಟ್ಟಿಗೆ ಎಸೆದಿದ್ದು ಬೇಕಾದಷ್ಟಿದೆ. ಈಗಲೂ ಮಾಡುತ್ತಿರೋದು ಅದನ್ನೇ.

ಯಾರು ಕೇಳುವರೆಂದು ನಾನು ಹಾಡುವುದಿಲ್ಲ! - ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಹಚ್ಚಿಸಿಕೊಂಡ ಹಾಡು. Suit ಆಗುತ್ತೆ ಕೂಡ.

ಹಾಡುವುದು ಅನಿವಾರ್ಯ ಕರ್ಮ ನನಗೆ! - ಅನ್ನೋ ಈ ಸಾಲು ಯಾಕೋ ನನಗಲ್ಲ. ಇದ್ಯಾವತ್ತೂ ಅನಿವಾರ್ಯ ಅಂತ ಅನ್ನಿಸಿಲ್ಲ. ಅಂದುಕೊಂಡಿದ್ದನ್ನ ಹೇಳಿಬಿಡೋದಕ್ಕೆ ಇದೊಂದು ದಾರಿ ಅಷ್ಟೇ.

ಬೇರೆಯವರ ಸಂತೋಷಕ್ಕೆ ಬರೆಯೋದು ನನಗೂ ಗೊತ್ತಿಲ್ಲ. ಅದು ಜಪ್ಪಯ್ಯ ಅಂದರೂ ಆಗದ ಮಾತು. ಆ ಸೃಷ್ಟಿಕರ್ತ 'ಬ್ರಹ್ಮ'ನಿಗೇ ಎಲ್ಲರನ್ನೂ ಮೆಚ್ಚಿಸೋ ಹಾಗೆ ಬರೆಯೋದು ಕಷ್ಟ ಅಂದ ಮೇಲೆ ನಮ್ಮಂತ 'ಹುಲುಮಾನವ'ರ ಕತೆಯೇನು ಅಲ್ವಾ?
ಸುಮ್ಮನೇ ಓದಿಕೊಳ್ಳಬೇಕಷ್ಟೆ. ಸರಿ ಅಂದರೆ ಸರಿ., ತಪ್ಪು ಅಂದರೆ ತಪ್ಪು., ತಿದ್ದಿಕೊಳ್ಳೋದಕ್ಕೆ ಅಂತ 'ಭಗವಂತ' ಕಳೆಯದಷ್ಟು ಸಮಯ ಮೀಸಲಾಗಿಟ್ಟಿದ್ದಾನೆ. ಪ್ರಯತ್ನ ನಮ್ಮದು, ಫಲಾಫಲ ಅಲ್ಲ.

ಜೀವನದ ಒಂದು 'ಪಾಲಿಸಿ(Policy)' ನಾನು ಯಾರನ್ನ ಗೌರವಿಸಬೇಕು ಅನ್ನೋದನ್ನ 'Decide' ಮಾಡೋದು ಈ ಕೆಳಗಿನಂತವರು''' -  Namely

'ನಾನು, ನಾನು ಮತ್ತು ನಾನು ಮಾತ್ರ'''.

ಇವಿಷ್ಟು ಹೇಳಬೇಕು ಅಂದುಕೊಂಡಿದ್ದು.

- ಶ್ರೀಕಾಂತ್ ಆಚಾರ್ಯ